Skip to content
ಫ್ಲ್ಯಾಶ್ ನ್ಯೂಸ್
ಜನವರಿಯಲ್ಲಾದರೂ ಜನರ ಸರದಿ ಬಂದೀತೇ? ಪಾಸ್ ಇದ್ದವರಿಗೆ ಸೌಧ, ಕಬ್ಬು ಬೆಳೆದವನಿಗೆ ಹೆದ್ದಾರಿ ನಾರ್ತ್ ಬ್ಲಾಕ್ ಮೇಲೆ ಕಪ್ಪು ಹೊಗೆ… ರೈಸಿನಾ ಹಿಲ್‌ನಲ್ಲಿ ಕೆಲಕಾಲ ಆತಂಕದ ಉಸಿರು ರಾವಣನಿಗೆ ಎಲ್ಲವೂ ಇತ್ತು, ಆದರೂ ಸೋತಿದ್ದೇಕೆ? ರಾಮಾಯಣ ಕಲಿಸುವ ಬದುಕಿನ 7 ಅಮೂಲ್ಯ ಪಾಠಗಳು ಗಾಂಧೀಜಿಯವರ ‘5ನೇ ಮಗ’ ಜಮ್ನಾಲಾಲ್ ಬಜಾಜ್ ಕಟ್ಟಿದ ಉದ್ಯಮ ಸಾಮ್ರಾಜ್ಯ ಎಷ್ಟು ದೊಡ್ಡದು ಗೊತ್ತಾ? ಬಾಲಿವುಡ್‌ಗೆ ಗ್ಯಾಂಗ್‌ಸ್ಟರ್‌ಗಳ ಕಾಟ! ಟೈಗರ್ ಶ್ರಾಫ್‌ನಿಂದ ಸಲ್ಮಾನ್ ಖಾನ್‌ವರೆಗೆ ಬೆದರಿಕೆಯ ಸುಳಿಯಲ್ಲಿ ಸೆಲೆಬ್ರಿಟಿಗಳು ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂಗ್ ಷಡ್ಯಂತ್ರ? ಕೃಪಾ ಆಳ್ವಾ ಹೆಸರು ಪ್ರಸ್ತಾಪಿಸಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ! ರೇಣುಕಾಸ್ವಾಮಿ ಕೇಸ್‌ಗೆ ಹೊಸ ತಿರುವು? ‘ಆ ವಿಷಯ ಗೊತ್ತೇ ಇಲ್ಲ’ ಎಂದ ಯಶಸ್ ಸೂರ್ಯ; ಸಾಕ್ಷಿ ಹೇಳಿಕೆಗೆ ಎಸ್‌ಪಿಪಿ ಆಕ್ಷೇಪ! ಸುದೀಪ್ ತಾಯಿ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನೆಪದಲ್ಲಿ ದೋಖಾ ಆರೋಪ! 27 ತಂಡಗಳಿಂದ ಹಣ ಸಂಗ್ರಹಿಸಿ ಪರಾರಿ? ತಿರುಮಲದಲ್ಲಿ ಇನ್ಮುಂದೆ ದಾರಿ ತಪ್ಪುವ ಭಯವಿಲ್ಲ! ಕನ್ನಡದಲ್ಲೂ ‘ವೆಂಕಟಾದ್ರಿ’ ಆ್ಯಪ್ ಲಭ್ಯ
Wednesday, 4 November 2026

ಗಣೇಶ ಹಬ್ಬದ ದಿನವೇ ಡಾಲಿ ಧನಂಜಯ್ ಮಗನ ಹೆಸರು ರಿವೀಲ್; ‘ಎರೆಯ’ ಹೆಸರಿನ ವಿಶೇಷತೆ ಏನು?

ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ತಮ್ಮ ಮಗನಿಗೆ ‘ಎರೆಯ’ ಎಂದು ನಾಮಕರಣ ಮಾಡಿರುವುದಾಗಿ ಗಣೇಶ ಚತುರ್ಥಿಯ ವಿಶೇಷ ದಿನದಂದು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಗನ ಹೆಸರನ್ನು ವಿಭಿನ್ನವಾಗಿ ಪರಿಚಯಿಸಿರುವ ಡಾಲಿ ದಂಪತಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಕರ್ನಾಟಕದ ನಕ್ಷೆಯ ಮಧ್ಯಭಾಗದಲ್ಲಿ ಮಗನ ಹೆಸರು ಮೂಡುವಂತೆ ವಿಶೇಷವಾಗಿ ವಿನ್ಯಾಸಗೊಳಿಸಿದ ಡಾಲರ್‌ ಮೂಲಕ ತಮ್ಮ ಪುಟ್ಟ ಮಗನ ಹೆಸರನ್ನು ಡಾಲಿ ದಂಪತಿ ರಿವೀಲ್ ಮಾಡಿದ್ದಾರೆ. ಈ ಮೂಲಕ ಕನ್ನಡದ ನೆಲ-ನುಡಿಯೊಂದಿಗೆ ಹೆಸರನ್ನು ಬೆಸೆದಿರುವುದು ವಿಶೇಷ ಗಮನ ಸೆಳೆದಿದೆ.

‘ಎರೆಯ’ ಎಂಬ ಹೆಸರು ಕೂಡ ವಿಶೇಷ ಅರ್ಥವನ್ನು ಹೊಂದಿದೆ. ಎರೆಯ ಎಂದರೆ ಒಡೆಯ, ಅಧಿಪತಿ ಎಂಬ ಅರ್ಥವಿದೆ. ಇತಿಹಾಸದ ಉಲ್ಲೇಖಗಳಲ್ಲೂ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರು ‘ಎರೆಯ’ ಎಂದಿತ್ತು ಎನ್ನಲಾಗುತ್ತದೆ. ಹೀಗಾಗಿ ಪಾರಂಪರಿಕ ಹಿನ್ನೆಲೆ ಹೊಂದಿರುವ ಈ ಹೆಸರನ್ನು ಮಗನಿಗೆ ಆಯ್ಕೆ ಮಾಡಿರುವುದು ಕುತೂಹಲ ಮೂಡಿಸಿದೆ.

ಮಗನ ಹೆಸರನ್ನು ಪರಿಚಯಿಸುವಾಗ ಡಾಲಿ ಧನಂಜಯ್ ಹಾಗೂ ಧನ್ಯತಾ, ತಮ್ಮ ಪುಟ್ಟ ಮಗನನ್ನು “ನಮ್ಮ ಪುಟ್ಟ ಬದುಕಿನ ಅಧಿಪತಿ, ನಮ್ಮ ಹೃದಯದ ರಾಜ ನಮ್ಮ ಎರೆಯ” ಎಂದು ಪ್ರೀತಿಯಿಂದ ಕರೆದಿದ್ದಾರೆ.

ಕಳೆದ ವರ್ಷ ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ ಡಾಲಿ ಧನಂಜಯ್ ಹಾಗೂ ಧನ್ಯತಾ, ಇದೀಗ ಪೋಷಕರಾಗಿರುವ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡು ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನದ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಇದೀಗ ಗಣೇಶ ಹಬ್ಬದ ಶುಭ ದಿನದಂದು ಮಗನ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿರುವ ಡಾಲಿ ದಂಪತಿಯ ‘ಎರೆಯ’ ಹೆಸರಿನ ಆಯ್ಕೆ ಅಭಿಮಾನಿಗಳ ಗಮನ ಸೆಳೆದಿದೆ.

praveen

ಸಂಬಂಧಿತ ಸುದ್ದಿಗಳು

Leave a Reply

Your email address will not be published. Required fields are marked *