Skip to content
ಫ್ಲ್ಯಾಶ್ ನ್ಯೂಸ್
ಜನವರಿಯಲ್ಲಾದರೂ ಜನರ ಸರದಿ ಬಂದೀತೇ? ಪಾಸ್ ಇದ್ದವರಿಗೆ ಸೌಧ, ಕಬ್ಬು ಬೆಳೆದವನಿಗೆ ಹೆದ್ದಾರಿ ನಾರ್ತ್ ಬ್ಲಾಕ್ ಮೇಲೆ ಕಪ್ಪು ಹೊಗೆ… ರೈಸಿನಾ ಹಿಲ್‌ನಲ್ಲಿ ಕೆಲಕಾಲ ಆತಂಕದ ಉಸಿರು ರಾವಣನಿಗೆ ಎಲ್ಲವೂ ಇತ್ತು, ಆದರೂ ಸೋತಿದ್ದೇಕೆ? ರಾಮಾಯಣ ಕಲಿಸುವ ಬದುಕಿನ 7 ಅಮೂಲ್ಯ ಪಾಠಗಳು ಗಾಂಧೀಜಿಯವರ ‘5ನೇ ಮಗ’ ಜಮ್ನಾಲಾಲ್ ಬಜಾಜ್ ಕಟ್ಟಿದ ಉದ್ಯಮ ಸಾಮ್ರಾಜ್ಯ ಎಷ್ಟು ದೊಡ್ಡದು ಗೊತ್ತಾ? ಬಾಲಿವುಡ್‌ಗೆ ಗ್ಯಾಂಗ್‌ಸ್ಟರ್‌ಗಳ ಕಾಟ! ಟೈಗರ್ ಶ್ರಾಫ್‌ನಿಂದ ಸಲ್ಮಾನ್ ಖಾನ್‌ವರೆಗೆ ಬೆದರಿಕೆಯ ಸುಳಿಯಲ್ಲಿ ಸೆಲೆಬ್ರಿಟಿಗಳು ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂಗ್ ಷಡ್ಯಂತ್ರ? ಕೃಪಾ ಆಳ್ವಾ ಹೆಸರು ಪ್ರಸ್ತಾಪಿಸಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ! ರೇಣುಕಾಸ್ವಾಮಿ ಕೇಸ್‌ಗೆ ಹೊಸ ತಿರುವು? ‘ಆ ವಿಷಯ ಗೊತ್ತೇ ಇಲ್ಲ’ ಎಂದ ಯಶಸ್ ಸೂರ್ಯ; ಸಾಕ್ಷಿ ಹೇಳಿಕೆಗೆ ಎಸ್‌ಪಿಪಿ ಆಕ್ಷೇಪ! ಸುದೀಪ್ ತಾಯಿ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನೆಪದಲ್ಲಿ ದೋಖಾ ಆರೋಪ! 27 ತಂಡಗಳಿಂದ ಹಣ ಸಂಗ್ರಹಿಸಿ ಪರಾರಿ? ತಿರುಮಲದಲ್ಲಿ ಇನ್ಮುಂದೆ ದಾರಿ ತಪ್ಪುವ ಭಯವಿಲ್ಲ! ಕನ್ನಡದಲ್ಲೂ ‘ವೆಂಕಟಾದ್ರಿ’ ಆ್ಯಪ್ ಲಭ್ಯ
Wednesday, 4 November 2026

ಸಲ್ಮಾನ್ ಆರತಿ ಮಾಡ್ತಿದ್ದಾಗಲೇ ಎಡವಟ್ಟು! ತಂಗಿ ಅರ್ಪಿತಾ ಕೂಗಿದ್ದೇ ವೈರಲ್

ಗಣಪತಿ ಆರತಿಯಲ್ಲಿ ಸಲ್ಮಾನ್ ಖಾನ್‌ಗೆ ಸಣ್ಣ ಎಡವಟ್ಟು! ಅಣ್ಣನಿಗೆ ತಂಗಿ ಅರ್ಪಿತಾ ಕೊಟ್ಟ ಕ್ಯೂಟ್ ಸೂಚನೆ ವೈರಲ್

ಸಲ್ಮಾನ್ ಖಾನ್ ಕುಟುಂಬದ ಗಣಪತಿ ವಿಸರ್ಜನೆ ಸಂಭ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಸಹೋದರ ಸೊಹೈಲ್ ಖಾನ್ ಅವರ ನಿವಾಸದಲ್ಲಿ ನಡೆದ ಗಣಪತಿ ಆಚರಣೆಯಲ್ಲಿ ಸಲ್ಮಾನ್ ಕುಟುಂಬದವರೊಂದಿಗೆ ಭಾಗವಹಿಸಿದ್ದರು.ವಿಸರ್ಜನೆಗೂ ಮುನ್ನ ಸಲ್ಮಾನ್ ಖಾನ್ ಗಣಪತಿಗೆ ಆರತಿ ಬೆಳಗಿದರು.

ಈ ವೇಳೆ ಅವರು ಆರತಿಯನ್ನು ಸ್ವಲ್ಪ ತಪ್ಪು ದಿಕ್ಕಿನಲ್ಲಿ ಮಾಡುತ್ತಿರುವುದನ್ನು ತಂಗಿ ಅರ್ಪಿತಾ ಗಮನಿಸಿದ್ದಾರೆ. ಕೂಡಲೇ “ಭಾಯ್” ಎಂದು ಕೂಗಿ ಸಲ್ಮಾನ್‌ಗೆ ಸೂಚನೆ ನೀಡಲು ಪ್ರಯತ್ನಿಸಿದ್ದಾರೆ. ಆದರೆ ಸುತ್ತಲಿನ ಭಜನೆ ಹಾಗೂ ಜಯಘೋಷದ ನಡುವೆ ಅವರಿಗೆ ಅದು ಕೇಳಿಸಲಿಲ್ಲ.ನಂತರ ಅರ್ಪಿತಾ ಹತ್ತಿರ ಹೋಗಿ ಆರತಿಯನ್ನು ಸರಿಯಾದ ರೀತಿಯಲ್ಲಿ ಮಾಡಲು ಸೂಚಿಸಿದ್ದಾರೆ.

ತಂಗಿಯ ಮಾತನ್ನು ಅರ್ಥ ಮಾಡಿಕೊಂಡ ಸಲ್ಮಾನ್ ನೀಡಿದ ಪ್ರತಿಕ್ರಿಯೆ ಅಲ್ಲಿದ್ದವರ ಗಮನ ಸೆಳೆದಿದೆ.ಈ ಗಣಪತಿ ಸಂಭ್ರಮದಲ್ಲಿ ಸಲ್ಮಾನ್ ಅವರ ಆಪ್ತ ಸ್ನೇಹಿತೆ ಎಂದು ಹೇಳಲಾಗುತ್ತಿರುವ ಇಲಿಯಾ ವಂಟೂರ್ ಕೂಡ ಭಾಗವಹಿಸಿದ್ದರು. ಅವರು ಕೂಡ ನಂತರ ಗಣಪತಿಗೆ ಆರತಿ ಬೆಳಗಿದರು.

ಸಲ್ಮಾನ್ ಅವರ ಕುಟುಂಬದ ಜೊತೆಗಿನ ಈ ಸರಳ ಹಾಗೂ ಆತ್ಮೀಯ ಕ್ಷಣಗಳ ವಿಡಿಯೋ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

praveen

ಸಂಬಂಧಿತ ಸುದ್ದಿಗಳು

Leave a Reply

Your email address will not be published. Required fields are marked *