Skip to content
ಫ್ಲ್ಯಾಶ್ ನ್ಯೂಸ್
ಜನವರಿಯಲ್ಲಾದರೂ ಜನರ ಸರದಿ ಬಂದೀತೇ? ಪಾಸ್ ಇದ್ದವರಿಗೆ ಸೌಧ, ಕಬ್ಬು ಬೆಳೆದವನಿಗೆ ಹೆದ್ದಾರಿ ನಾರ್ತ್ ಬ್ಲಾಕ್ ಮೇಲೆ ಕಪ್ಪು ಹೊಗೆ… ರೈಸಿನಾ ಹಿಲ್‌ನಲ್ಲಿ ಕೆಲಕಾಲ ಆತಂಕದ ಉಸಿರು ರಾವಣನಿಗೆ ಎಲ್ಲವೂ ಇತ್ತು, ಆದರೂ ಸೋತಿದ್ದೇಕೆ? ರಾಮಾಯಣ ಕಲಿಸುವ ಬದುಕಿನ 7 ಅಮೂಲ್ಯ ಪಾಠಗಳು ಗಾಂಧೀಜಿಯವರ ‘5ನೇ ಮಗ’ ಜಮ್ನಾಲಾಲ್ ಬಜಾಜ್ ಕಟ್ಟಿದ ಉದ್ಯಮ ಸಾಮ್ರಾಜ್ಯ ಎಷ್ಟು ದೊಡ್ಡದು ಗೊತ್ತಾ? ಬಾಲಿವುಡ್‌ಗೆ ಗ್ಯಾಂಗ್‌ಸ್ಟರ್‌ಗಳ ಕಾಟ! ಟೈಗರ್ ಶ್ರಾಫ್‌ನಿಂದ ಸಲ್ಮಾನ್ ಖಾನ್‌ವರೆಗೆ ಬೆದರಿಕೆಯ ಸುಳಿಯಲ್ಲಿ ಸೆಲೆಬ್ರಿಟಿಗಳು ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂಗ್ ಷಡ್ಯಂತ್ರ? ಕೃಪಾ ಆಳ್ವಾ ಹೆಸರು ಪ್ರಸ್ತಾಪಿಸಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ! ರೇಣುಕಾಸ್ವಾಮಿ ಕೇಸ್‌ಗೆ ಹೊಸ ತಿರುವು? ‘ಆ ವಿಷಯ ಗೊತ್ತೇ ಇಲ್ಲ’ ಎಂದ ಯಶಸ್ ಸೂರ್ಯ; ಸಾಕ್ಷಿ ಹೇಳಿಕೆಗೆ ಎಸ್‌ಪಿಪಿ ಆಕ್ಷೇಪ! ಸುದೀಪ್ ತಾಯಿ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನೆಪದಲ್ಲಿ ದೋಖಾ ಆರೋಪ! 27 ತಂಡಗಳಿಂದ ಹಣ ಸಂಗ್ರಹಿಸಿ ಪರಾರಿ? ತಿರುಮಲದಲ್ಲಿ ಇನ್ಮುಂದೆ ದಾರಿ ತಪ್ಪುವ ಭಯವಿಲ್ಲ! ಕನ್ನಡದಲ್ಲೂ ‘ವೆಂಕಟಾದ್ರಿ’ ಆ್ಯಪ್ ಲಭ್ಯ
Wednesday, 4 November 2026

800 ಬಾಲಕಾರ್ಮಿಕರ ರಕ್ಷಣೆ: ಕರ್ನಾಟಕ ಪೊಲೀಸರ ಮೆಗಾ ಆಪರೇಷನ್!

ಯಶವಂತಪುರ ಎಪಿಎಂಸಿ ಯಾರ್ಡ್‌ನಲ್ಲಿ ಬಾಲಕಾರ್ಮಿಕರು ಪತ್ತೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಬಾಲಕಾರ್ಮಿಕ ಪದ್ಧತಿ ವಿರುದ್ಧ ಸಮರ ಸಾರಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ರಾಜ್ಯಾದ್ಯಂತ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 16,951 ಸ್ಥಳಗಳನ್ನು ತಪಾಸಣೆ ನಡೆಸಿ ಸುಮಾರು 800 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ.

ರಾಜ್ಯದ 962 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಂಗಡಿಗಳು, ಗ್ಯಾರೇಜ್‌ಗಳು, ಹೋಟೆಲ್‌ಗಳು, ಕೈಗಾರಿಕಾ ಘಟಕಗಳು, ಮಾರುಕಟ್ಟೆಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳನ್ನು ಪರಿಶೀಲಿಸಲಾಗಿದೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಮುಂದೆ ಹಾಜರುಪಡಿಸಿ, ಅವರ ಸುರಕ್ಷತೆ ಮತ್ತು ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಬೆಂಗಳೂರಿನಲ್ಲಿ ಒಂದೇ ದಿನ 503 ಮಕ್ಕಳು ರಕ್ಷಣೆ

ರಾಜ್ಯದಲ್ಲೇ ಅತಿ ಹೆಚ್ಚು ಬಾಲಕಾರ್ಮಿಕರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ನಗರದ 188 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 5,897 ಸ್ಥಳಗಳನ್ನು ಪರಿಶೀಲಿಸಲಾಗಿದ್ದು, 503 ಮಕ್ಕಳನ್ನು ರಕ್ಷಿಸಲಾಗಿದೆ. ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಆರೋಪದ ಮೇಲೆ 18 ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇನ್ನು ವಿಜಯಪುರದಲ್ಲಿ 72, ತುಮಕೂರಿನಲ್ಲಿ 33, ಕೊಪ್ಪಳದಲ್ಲಿ 27, ಕಲಬುರಗಿ ನಗರದಲ್ಲಿ 22, ಚಿಕ್ಕಬಳ್ಳಾಪುರದಲ್ಲಿ 16, ಬಳ್ಳಾರಿಯಲ್ಲಿ 15 ಹಾಗೂ ಮೈಸೂರಿನಲ್ಲಿ 13 ಮಕ್ಕಳು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ.

ಯಶವಂತಪುರ ಘಟನೆ ಬಳಿಕ ರಾಜ್ಯವ್ಯಾಪಿ ಕಾರ್ಯಾಚರಣೆ

ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಯಾರ್ಡ್‌ಗೆ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಮಕ್ಕಳು ಕೆಲಸ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿತ್ತು. ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿ ಮಕ್ಕಳನ್ನು ರಕ್ಷಿಸುವಂತೆ ಹಾಗೂ ಬಾಲಕಾರ್ಮಿಕ ಪದ್ಧತಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು.

ಈ ಘಟನೆ ಬಳಿಕ ರಾಜ್ಯ ಪೊಲೀಸ್ ಇಲಾಖೆ ಕಾರ್ಯಾಚರಣೆಗೆ ವೇಗ ನೀಡಿದ್ದು, ಒಂದೇ ದಿನದಲ್ಲಿ ಸಾವಿರಾರು ಸ್ಥಳಗಳನ್ನು ಪರಿಶೀಲಿಸಿ ನೂರಾರು ಮಕ್ಕಳನ್ನು ಕೆಲಸದಿಂದ ವಿಮುಕ್ತಿಗೊಳಿಸಿದೆ.

ಮಾಲೀಕರ ವಿರುದ್ಧ ಕಾನೂನು ಕ್ರಮ

ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಂಡಿದ್ದ ಆರೋಪದ ಮೇಲೆ ಸಂಬಂಧಪಟ್ಟ ಮಾಲೀಕರು ಮತ್ತು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸುವುದು, ನೋಟಿಸ್ ಜಾರಿ ಸೇರಿದಂತೆ ವಿವಿಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಕ್ಕಳ ಕೈಯಲ್ಲಿ ಕೆಲಸದ ಸಲಕರಣೆಗಳ ಬದಲು ಪುಸ್ತಕ ಇರಬೇಕು ಎಂಬ ಸಂದೇಶದೊಂದಿಗೆ ರಾಜ್ಯಾದ್ಯಂತ ನಡೆದ ಈ ಕಾರ್ಯಾಚರಣೆ, ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರದ ಕಠಿಣ ಕ್ರಮಕ್ಕೆ ಸಾಕ್ಷಿಯಾಗಿದೆ.

praveen

ಸಂಬಂಧಿತ ಸುದ್ದಿಗಳು

Leave a Reply

Your email address will not be published. Required fields are marked *