Skip to content
ಫ್ಲ್ಯಾಶ್ ನ್ಯೂಸ್
ಜನವರಿಯಲ್ಲಾದರೂ ಜನರ ಸರದಿ ಬಂದೀತೇ? ಪಾಸ್ ಇದ್ದವರಿಗೆ ಸೌಧ, ಕಬ್ಬು ಬೆಳೆದವನಿಗೆ ಹೆದ್ದಾರಿ ನಾರ್ತ್ ಬ್ಲಾಕ್ ಮೇಲೆ ಕಪ್ಪು ಹೊಗೆ… ರೈಸಿನಾ ಹಿಲ್‌ನಲ್ಲಿ ಕೆಲಕಾಲ ಆತಂಕದ ಉಸಿರು ರಾವಣನಿಗೆ ಎಲ್ಲವೂ ಇತ್ತು, ಆದರೂ ಸೋತಿದ್ದೇಕೆ? ರಾಮಾಯಣ ಕಲಿಸುವ ಬದುಕಿನ 7 ಅಮೂಲ್ಯ ಪಾಠಗಳು ಗಾಂಧೀಜಿಯವರ ‘5ನೇ ಮಗ’ ಜಮ್ನಾಲಾಲ್ ಬಜಾಜ್ ಕಟ್ಟಿದ ಉದ್ಯಮ ಸಾಮ್ರಾಜ್ಯ ಎಷ್ಟು ದೊಡ್ಡದು ಗೊತ್ತಾ? ಬಾಲಿವುಡ್‌ಗೆ ಗ್ಯಾಂಗ್‌ಸ್ಟರ್‌ಗಳ ಕಾಟ! ಟೈಗರ್ ಶ್ರಾಫ್‌ನಿಂದ ಸಲ್ಮಾನ್ ಖಾನ್‌ವರೆಗೆ ಬೆದರಿಕೆಯ ಸುಳಿಯಲ್ಲಿ ಸೆಲೆಬ್ರಿಟಿಗಳು ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂಗ್ ಷಡ್ಯಂತ್ರ? ಕೃಪಾ ಆಳ್ವಾ ಹೆಸರು ಪ್ರಸ್ತಾಪಿಸಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ! ರೇಣುಕಾಸ್ವಾಮಿ ಕೇಸ್‌ಗೆ ಹೊಸ ತಿರುವು? ‘ಆ ವಿಷಯ ಗೊತ್ತೇ ಇಲ್ಲ’ ಎಂದ ಯಶಸ್ ಸೂರ್ಯ; ಸಾಕ್ಷಿ ಹೇಳಿಕೆಗೆ ಎಸ್‌ಪಿಪಿ ಆಕ್ಷೇಪ! ಸುದೀಪ್ ತಾಯಿ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನೆಪದಲ್ಲಿ ದೋಖಾ ಆರೋಪ! 27 ತಂಡಗಳಿಂದ ಹಣ ಸಂಗ್ರಹಿಸಿ ಪರಾರಿ? ತಿರುಮಲದಲ್ಲಿ ಇನ್ಮುಂದೆ ದಾರಿ ತಪ್ಪುವ ಭಯವಿಲ್ಲ! ಕನ್ನಡದಲ್ಲೂ ‘ವೆಂಕಟಾದ್ರಿ’ ಆ್ಯಪ್ ಲಭ್ಯ
Wednesday, 4 November 2026

BBK 13: ಮಂಜನ ಮಾತು-ಮಜಾಕ್ಕೆ ಸ್ಪರ್ಧಿಗಳು ಫಿದಾ?ಗಗನ್‌ ನಡೆಗೆ ವೀಕ್ಷಕರು ಗರಂ!

ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಅಸಲಿ ಆಟ..! ಮಂಜು-ಗಗನ್ ನಡುವೆ ಯಾರು ಹೀರೋ, ಯಾರು ವಿಲನ್?

ಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲ ವಾರವೇ ಸ್ಪರ್ಧಿಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ವೇದಿಕೆಯಾಗಿದೆ. ಟಾಸ್ಕ್‌ಗಳಿಗಿಂತಲೂ ಇದೀಗ ಮಾತಿನ ಸಮರ, ಟಾರ್ಗೆಟಿಂಗ್ ಮತ್ತು ಗ್ರೂಪಿಸಂ ಆರೋಪಗಳು ಹೆಚ್ಚು ಸದ್ದು ಮಾಡುತ್ತಿವೆ.

ಈ ನಡುವೆ ಮಂಜುನಾಥ್ ಹಾಗೂ ಗಗನ್ ಇಬ್ಬರೂ ಮನೆಯೊಳಗೆ ಪ್ರಮುಖ ಚರ್ಚೆಯ ವಿಷಯವಾಗಿದ್ದಾರೆ. ಆದರೆ ಇಬ್ಬರ ಆಟದ ಶೈಲಿ ಮಾತ್ರ ಸಂಪೂರ್ಣ ವಿಭಿನ್ನ.

ಮಂಜುನಾಥ್ ಅವರ ನೇರ ಮಾತುಗಳು ಕೆಲವರಿಗೆ ಕಿರಿಕಿರಿ ಎನಿಸುತ್ತಿದ್ದರೆ, ಇನ್ನೂ ಕೆಲವರು ಇದೇ ಆಟದ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ. ಮನೆಯ ಬಹುತೇಕ ಸ್ಪರ್ಧಿಗಳು ಡಿಪಾರ್ಚರ್‌ ಪಟ್ಟಿಗೆ ಮಂಜುನಾಥ್ ಹೆಸರನ್ನು ಸೂಚಿಸಿದಾಗ, ಅವರು ಅದನ್ನೇ ಸವಾಲಾಗಿ ಸ್ವೀಕರಿಸಿ ಇಡೀ ಮನೆಯ ವಿರುದ್ಧ ತಿರುಗಿಬಿದ್ದಿದ್ದಾರೆ.

ಮತ್ತೊಂದೆಡೆ ಗಗನ್ ಕೂಡ ಒಂದರ ಹಿಂದೆ ಒಂದರಂತೆ ವಿವಾದಕ್ಕೆ ಸಿಲುಕುತ್ತಿದ್ದಾರೆ. ಆಸಿಯಾ ಜೊತೆಗಿನ ಜಗಳದ ಬೆನ್ನಲ್ಲೇ ಇದೀಗ ಕಾವ್ಯಾ ಗೌಡ ಜೊತೆಗೂ ಮಾತಿನ ಚಕಮಕಿ ನಡೆದಿದೆ. ಮನೆಯ ಸ್ವಚ್ಛತೆ ವಿಚಾರವಾಗಿ ಶುರುವಾದ ಗಲಾಟೆ ಪ್ರೋಮೋದಲ್ಲಿ ತೀವ್ರ ಸ್ವರೂಪ ಪಡೆದಿರುವುದು ಕಂಡುಬಂದಿದೆ.

ಇಷ್ಟೇ ಅಲ್ಲ, ಗಗನ್ ಮತ್ತು ತಾಂಡವ್ ರಾಮ್ ನಾಮಿನೇಷನ್ ವಿಚಾರವನ್ನು ಚರ್ಚಿಸಿರುವ ಆರೋಪ ಕೂಡ ವೀಕ್ಷಕರ ಗಮನ ಸೆಳೆದಿದೆ. ಬಿಗ್‌ಬಾಸ್ ಮನೆಯ ನಿಯಮಗಳಿಗೆ ವಿರುದ್ಧವಾಗಿ ನಾಮಿನೇಷನ್ ಬಗ್ಗೆ ಮಾತನಾಡಿದ್ದರೆ, ಇವರಿಗೆ ಶಿಕ್ಷೆ ಏನು ಎಂಬ ಪ್ರಶ್ನೆ ಇದೀಗ ವೀಕ್ಷಕರದ್ದು.

ಒಟ್ಟಿನಲ್ಲಿ ಮೊದಲ ವಾರವೇ ಬಿಗ್‌ಬಾಸ್ ಮನೆಯಲ್ಲಿ ಎರಡು ರೀತಿಯ ಆಟ ಶುರುವಾಗಿದೆ—
ಒಂದೆಡೆ ಮಂಜುನಾಥ್ ಅವರ ರೆಬಲ್ ಆಟ… ಮತ್ತೊಂದೆಡೆ ಗಗನ್ ಅವರ ನಿರಂತರ ವಿವಾದಗಳು.

ಮುಂದಿನ ದಿನಗಳಲ್ಲಿ ಇವರಿಬ್ಬರ ಆಟ ಯಾವ ತಿರುವು ಪಡೆಯಲಿದೆ ಅನ್ನೋದೇ ಈಗ ಕುತೂಹಲ.

praveen

ಸಂಬಂಧಿತ ಸುದ್ದಿಗಳು

Leave a Reply

Your email address will not be published. Required fields are marked *