Skip to content
ಫ್ಲ್ಯಾಶ್ ನ್ಯೂಸ್
ಜನವರಿಯಲ್ಲಾದರೂ ಜನರ ಸರದಿ ಬಂದೀತೇ? ಪಾಸ್ ಇದ್ದವರಿಗೆ ಸೌಧ, ಕಬ್ಬು ಬೆಳೆದವನಿಗೆ ಹೆದ್ದಾರಿ ನಾರ್ತ್ ಬ್ಲಾಕ್ ಮೇಲೆ ಕಪ್ಪು ಹೊಗೆ… ರೈಸಿನಾ ಹಿಲ್‌ನಲ್ಲಿ ಕೆಲಕಾಲ ಆತಂಕದ ಉಸಿರು ರಾವಣನಿಗೆ ಎಲ್ಲವೂ ಇತ್ತು, ಆದರೂ ಸೋತಿದ್ದೇಕೆ? ರಾಮಾಯಣ ಕಲಿಸುವ ಬದುಕಿನ 7 ಅಮೂಲ್ಯ ಪಾಠಗಳು ಗಾಂಧೀಜಿಯವರ ‘5ನೇ ಮಗ’ ಜಮ್ನಾಲಾಲ್ ಬಜಾಜ್ ಕಟ್ಟಿದ ಉದ್ಯಮ ಸಾಮ್ರಾಜ್ಯ ಎಷ್ಟು ದೊಡ್ಡದು ಗೊತ್ತಾ? ಬಾಲಿವುಡ್‌ಗೆ ಗ್ಯಾಂಗ್‌ಸ್ಟರ್‌ಗಳ ಕಾಟ! ಟೈಗರ್ ಶ್ರಾಫ್‌ನಿಂದ ಸಲ್ಮಾನ್ ಖಾನ್‌ವರೆಗೆ ಬೆದರಿಕೆಯ ಸುಳಿಯಲ್ಲಿ ಸೆಲೆಬ್ರಿಟಿಗಳು ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂಗ್ ಷಡ್ಯಂತ್ರ? ಕೃಪಾ ಆಳ್ವಾ ಹೆಸರು ಪ್ರಸ್ತಾಪಿಸಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ! ರೇಣುಕಾಸ್ವಾಮಿ ಕೇಸ್‌ಗೆ ಹೊಸ ತಿರುವು? ‘ಆ ವಿಷಯ ಗೊತ್ತೇ ಇಲ್ಲ’ ಎಂದ ಯಶಸ್ ಸೂರ್ಯ; ಸಾಕ್ಷಿ ಹೇಳಿಕೆಗೆ ಎಸ್‌ಪಿಪಿ ಆಕ್ಷೇಪ! ಸುದೀಪ್ ತಾಯಿ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನೆಪದಲ್ಲಿ ದೋಖಾ ಆರೋಪ! 27 ತಂಡಗಳಿಂದ ಹಣ ಸಂಗ್ರಹಿಸಿ ಪರಾರಿ? ತಿರುಮಲದಲ್ಲಿ ಇನ್ಮುಂದೆ ದಾರಿ ತಪ್ಪುವ ಭಯವಿಲ್ಲ! ಕನ್ನಡದಲ್ಲೂ ‘ವೆಂಕಟಾದ್ರಿ’ ಆ್ಯಪ್ ಲಭ್ಯ
Wednesday, 4 November 2026

‘ತಾಕತ್ತಿದ್ದರೆ ನುಗ್ಗಿ ತೋರಿಸು’.. ಪ್ರತಾಪ್ ಸಿಂಹಗೆ ಪ್ರದೀಪ್ ಈಶ್ವರ್ ಸವಾಲ್!

ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ ಮತ್ತೊಂದು ಹಂತಕ್ಕೆ ತಲುಪಿದೆ. ಪೊಲೀಸ್ ಠಾಣೆಗೆ ನುಗ್ಗುವುದಾಗಿ ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆಗೆ ಪ್ರದೀಪ್ ಈಶ್ವರ್ ಇದೀಗ ಖಾರವಾಗಿ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರದೀಪ್ ಈಶ್ವರ್, “ನುಗ್ಗಿ ತೋರಿಸು, ನಾನು ನಿನ್ನನ್ನು ಚಾಲೆಂಜ್ ಮಾಡ್ತೀನಿ. ನಿನಗೆ ಪರಪ್ಪನ ಅಗ್ರಹಾರ ಗ್ಯಾರಂಟಿ” ಎಂದು ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೆ, “ತಾಕತ್ತಿದ್ದರೆ ಟ್ರೈ ಮಾಡು ಮಗ, ಆಲ್ ದಿ ಬೆಸ್ಟ್ ರಣಹೇಡಿ” ಎಂದು ವ್ಯಂಗ್ಯವಾಡಿದ್ದಾರೆ.

ಅಷ್ಟಕ್ಕೂ ಈ ವಾಕ್ಸಮರಕ್ಕೆ ಕಾರಣವಾಗಿದ್ದು ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ನಡೆದ ಗಣೇಶೋತ್ಸವದ ಶಾಂತಿ ಸಭೆ. ಗಣೇಶ ಮೆರವಣಿಗೆ ವೇಳೆ ಪೊಲೀಸರು ಸೂಚಿಸುವ ಮಾರ್ಗವನ್ನೇ ಬಳಸಬೇಕು ಹಾಗೂ ಮಸೀದಿ ಮುಂದೆ ಮೆರವಣಿಗೆ ನಡೆಸುವುದು ಅಥವಾ ಪಟಾಕಿ ಸಿಡಿಸುವಂತಿಲ್ಲ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಸೂಚನೆ ನೀಡಿದ್ದರು.

ಪೊಲೀಸ್ ಅಧಿಕಾರಿಯ ಈ ಹೇಳಿಕೆಗೆ ಪ್ರತಾಪ್ ಸಿಂಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪೊಲೀಸರು ಇದೇ ರೀತಿಯ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ, ತಾವೇ ಪೊಲೀಸ್ ಠಾಣೆಗೆ ನುಗ್ಗುವುದಾಗಿ ಎಚ್ಚರಿಕೆ ನೀಡಿದ್ದರು.

ಪ್ರತಾಪ್ ಸಿಂಹ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಪ್ರತಿಕ್ರಿಯಿಸಿ, ಪೊಲೀಸ್ ಠಾಣೆಗೆ ನುಗ್ಗುವವರಿಗೆ ಮುಕ್ತ ಆಹ್ವಾನವಿದೆ. ಠಾಣೆಗೆ ನುಗ್ಗಿದ ಬಳಿಕ ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ವ್ಯಂಗ್ಯವಾಡಿದ್ದರು.

ಇದೀಗ ಪ್ರದೀಪ್ ಈಶ್ವರ್ ಕೂಡ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಾಪ್ ಸಿಂಹ ಅವರಿಗೆ ನೇರ ಸವಾಲು ಹಾಕಿದ್ದಾರೆ. ‘ನುಗ್ಗಿ ತೋರಿಸು’ ಎಂಬ ಸವಾಲಿನ ಮೂಲಕ ಇಬ್ಬರ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಇದೀಗ ಗಮನ ಸೆಳೆದಿದೆ.

praveen

ಸಂಬಂಧಿತ ಸುದ್ದಿಗಳು

Leave a Reply

Your email address will not be published. Required fields are marked *

Exit mobile version