Skip to content
ಫ್ಲ್ಯಾಶ್ ನ್ಯೂಸ್
ಜನವರಿಯಲ್ಲಾದರೂ ಜನರ ಸರದಿ ಬಂದೀತೇ? ಪಾಸ್ ಇದ್ದವರಿಗೆ ಸೌಧ, ಕಬ್ಬು ಬೆಳೆದವನಿಗೆ ಹೆದ್ದಾರಿ ನಾರ್ತ್ ಬ್ಲಾಕ್ ಮೇಲೆ ಕಪ್ಪು ಹೊಗೆ… ರೈಸಿನಾ ಹಿಲ್‌ನಲ್ಲಿ ಕೆಲಕಾಲ ಆತಂಕದ ಉಸಿರು ರಾವಣನಿಗೆ ಎಲ್ಲವೂ ಇತ್ತು, ಆದರೂ ಸೋತಿದ್ದೇಕೆ? ರಾಮಾಯಣ ಕಲಿಸುವ ಬದುಕಿನ 7 ಅಮೂಲ್ಯ ಪಾಠಗಳು ಗಾಂಧೀಜಿಯವರ ‘5ನೇ ಮಗ’ ಜಮ್ನಾಲಾಲ್ ಬಜಾಜ್ ಕಟ್ಟಿದ ಉದ್ಯಮ ಸಾಮ್ರಾಜ್ಯ ಎಷ್ಟು ದೊಡ್ಡದು ಗೊತ್ತಾ? ಬಾಲಿವುಡ್‌ಗೆ ಗ್ಯಾಂಗ್‌ಸ್ಟರ್‌ಗಳ ಕಾಟ! ಟೈಗರ್ ಶ್ರಾಫ್‌ನಿಂದ ಸಲ್ಮಾನ್ ಖಾನ್‌ವರೆಗೆ ಬೆದರಿಕೆಯ ಸುಳಿಯಲ್ಲಿ ಸೆಲೆಬ್ರಿಟಿಗಳು ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂಗ್ ಷಡ್ಯಂತ್ರ? ಕೃಪಾ ಆಳ್ವಾ ಹೆಸರು ಪ್ರಸ್ತಾಪಿಸಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ! ರೇಣುಕಾಸ್ವಾಮಿ ಕೇಸ್‌ಗೆ ಹೊಸ ತಿರುವು? ‘ಆ ವಿಷಯ ಗೊತ್ತೇ ಇಲ್ಲ’ ಎಂದ ಯಶಸ್ ಸೂರ್ಯ; ಸಾಕ್ಷಿ ಹೇಳಿಕೆಗೆ ಎಸ್‌ಪಿಪಿ ಆಕ್ಷೇಪ! ಸುದೀಪ್ ತಾಯಿ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನೆಪದಲ್ಲಿ ದೋಖಾ ಆರೋಪ! 27 ತಂಡಗಳಿಂದ ಹಣ ಸಂಗ್ರಹಿಸಿ ಪರಾರಿ? ತಿರುಮಲದಲ್ಲಿ ಇನ್ಮುಂದೆ ದಾರಿ ತಪ್ಪುವ ಭಯವಿಲ್ಲ! ಕನ್ನಡದಲ್ಲೂ ‘ವೆಂಕಟಾದ್ರಿ’ ಆ್ಯಪ್ ಲಭ್ಯ
Wednesday, 4 November 2026

ಅಂಬಾರಿ ಇಲ್ಲದಿದ್ರೂ ಅಭಿಮನ್ಯುವಿನ ಖದರ್ ಕಮ್ಮಿಯಾಗಿಲ್ಲ; ‘ನಿಶಾನೆ ಆನೆ’ಯಾಗಿ ಅರಮನೆಗೆ ಭರ್ಜರಿ ಎಂಟ್ರಿ!

ಮೈಸೂರು ದಸರಾ ಅಂದ್ರೆ ಆನೆಗಳ ಗಾಂಭೀರ್ಯ, ಜಂಬೂ ಸವಾರಿ ಅಂದ್ರೆ ಅಭಿಮನ್ಯುವಿನ ನೆನಪು—ಇವೆರಡಕ್ಕೂ ವರ್ಷಗಳ ನಂಟಿದೆ. ಇದೀಗ ಅದೇ ಅಭಿಮನ್ಯು ಮತ್ತೊಮ್ಮೆ ಮೈಸೂರು ಅರಮನೆಯತ್ತ ಹೆಜ್ಜೆ ಹಾಕಿದ್ದು, ಈ ಬಾರಿಯ ದಸರಾದಲ್ಲಿ ಹೊಸ ಜವಾಬ್ದಾರಿಯೊಂದಿಗೆ ಕಣಕ್ಕಿಳಿಯಲಿದೆ.

2026ರ ಮೈಸೂರು ದಸರಾ ಮಹೋತ್ಸವಕ್ಕೆ ಅಭಿಮನ್ಯುವನ್ನು ‘ನಿಶಾನೆ ಆನೆ’ಯಾಗಿ ಆಯ್ಕೆ ಮಾಡಲಾಗಿದೆ. ಜಂಬೂ ಸವಾರಿಯಲ್ಲಿ ಆನೆಗಳ ತಂಡಕ್ಕೆ ಮುನ್ನಡೆ ನೀಡುವ ವಿಶೇಷ ಹೊಣೆ ಈ ಬಾರಿ ಅಭಿಮನ್ಯುವಿನ ಮೇಲಿದೆ.

ಇಂದು ಬೆಳಗ್ಗೆ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅಭಿಮನ್ಯುವನ್ನು ಬರಮಾಡಿಕೊಳ್ಳಲಾಯಿತು. ಗಂಧದಗುಡಿ ಫೌಂಡೇಶನ್ ಹಾಗೂ ಅಭಿಮನ್ಯು ಅಭಿಮಾನಿಗಳ ವತಿಯಿಂದ ಬೃಹತ್ ಮೋಸಂಬಿ ಹಾರ ಮತ್ತು ಸುಮಾರು 10 ಕೆಜಿ ತೂಕದ ಪೇಟ ಅರ್ಪಿಸಲಾಯಿತು. ಅರಮನೆ ಮಂಡಳಿ ವತಿಯಿಂದ ಫಲ-ತಾಂಬೂಲ ನೀಡಿ ಆನೆಗೆ ಸ್ವಾಗತ ಕೋರಲಾಯಿತು.

ಅಭಿಮನ್ಯು ಎಂದರೆ ದಸರಾ ಅಭಿಮಾನಿಗಳಿಗೆ ವಿಶೇಷ ಭಾವನೆ. ಹಲವು ವರ್ಷಗಳ ಕಾಲ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ದ ಈ ಹಿರಿಯ ಆನೆ, ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಯಾದ ಬಳಿಕವೂ ದಸರಾ ಸಂಭ್ರಮದಿಂದ ದೂರವಾಗಿಲ್ಲ.

ಅಭಿಮಾನಿಗಳ ಬಹುದಿನಗಳ ಬೇಡಿಕೆಯಂತೆ ಈ ಬಾರಿಯೂ ಅಭಿಮನ್ಯು ದಸರಾ ಮಹೋತ್ಸವದ ಭಾಗವಾಗುತ್ತಿದೆ. ಈ ಬಾರಿ ಅಂಬಾರಿ ಹೊರುವ ಬದಲು ನಿಶಾನೆ ಆನೆಯಾಗಿ ದಸರಾ ಆನೆಗಳ ಮೆರವಣಿಗೆಗೆ ಮುನ್ನಡೆ ನೀಡಲಿದೆ.

ಮುಖ್ಯ ದಸರಾ ಕಾರ್ಯಕ್ರಮಕ್ಕೂ ಮುನ್ನ ಆನೆಗಳಿಗೆ ವಿಶೇಷ ತರಬೇತಿ ಮತ್ತು ಸಿದ್ಧತೆ ನಡೆಯಲಿದೆ. ಅರಮನೆ ಆವರಣ ಹಾಗೂ ಜಂಬೂ ಸವಾರಿಯ ವೇಳೆ ಜನಸಂದಣಿ ಹೆಚ್ಚಿರುವ ಹಿನ್ನೆಲೆಯಲ್ಲಿ ಆನೆಗಳ ಸುರಕ್ಷತೆ ಮತ್ತು ನಿಯಂತ್ರಣಕ್ಕೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಇನ್ನೊಂದೆಡೆ, ಅಕ್ಟೋಬರ್ 11ರಂದು ಚಾಮುಂಡಿ ಬೆಟ್ಟದಲ್ಲಿ 2026ರ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಈ ಬಾರಿ ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಗಿದ್ದು, ಮೈಸೂರು ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ ನೀಡಲಾಗಿದೆ.

ಅದ್ಧೂರಿ ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪಂಜಿನ ಕವಾಯತು ಸೇರಿದಂತೆ ಹಲವು ಕಾರ್ಯಕ್ರಮಗಳೊಂದಿಗೆ ದಸರಾ ಸಂಭ್ರಮ ಕಳೆಗಟ್ಟಲಿದೆ.

praveen

ಸಂಬಂಧಿತ ಸುದ್ದಿಗಳು

Leave a Reply

Your email address will not be published. Required fields are marked *

Exit mobile version